Thursday, March 4, 2010

ನಗುತಿರು ನೀ ಸೋತಾಗಲೂ.......


"If the looser keeps his smile,than the winner will loose the thrill of victory"

      ಇದು ಪ್ರತಿನಿತ್ಯ ನಮ್ಮ ಮೊಬೈಲಿನಲ್ಲಿ ಹರಿದಾಡುವ ಸಂದೇಶಗಳಲ್ಲಿ ಒಂದು. ಇದರಲ್ಲೇನು ವಿಶೇಷ? ಎಂದು ನಿಮಗನಿಸಬಹುದು.ಆದರೆ ಈ ಸಂದೇಶದ ಮಹತ್ವ ಅರಿವಾಗುವುದೇ ನೀವು ಸೋತು ದುಃಖದಲ್ಲಿದ್ದಾಗ. ಅಂಥ ಸಂದರ್ಭದಲ್ಲಿ ಈ ಸಂದೇಶವನ್ನೊಮ್ಮೆ ಓದಿ ನೋಡಿ. ನಿಮಗೆ ಖಂಡಿತವಾಗಿ ಈ ವಾಕ್ಯಗಳಲ್ಲಿ ಅಡಗಿರುವ ಸತ್ಯದ ಅರಿವಾಗುತದೆ. ಆಗ ನಿಮ್ಮಲ್ಲಿ ಒಂದು ರೀತಿಯ ಆತ್ಮಸ್ಥೈರ್ಯವೋ ಅಥವಾ ಹುಚ್ಚು ಸಂಭ್ರಮವೋ ಉಂಟಾಗುತ್ತದೆ. ಅದೇನೇ ಆದರೂ ನಿಮ್ಮ ಮನಸ್ಸಿಗೆ ನೆಮ್ಮದಿಯಂತೂ ಖಂಡಿತ ಸಿಗುತ್ತದೆ.


      ನಮ್ಮ ಪ್ರತಿನಿತ್ಯದ ಜೀವನದ ಜಂಜಾಟದಲ್ಲಿ ಎಷ್ಟೋ ಸಲ ನಾವು ಸೋಲುತೇವೆ.ಅದು ನಮ್ಮ ದೌರ್ಬಲ್ಯಗಳಿಂದ ಆದ ಸೋಲಾಗಿದ್ದರೆ ಅದನ್ನು ಸರಿಪಡಿಸಿ ಮತ್ತೆ ಗೆಲ್ಲಬಹುದು. ಆದರೆ ಅದು ಯಾರದೋ ಕುತಂತ್ರದಿಂದ ಅನ್ಯಾಯವಾಗಿ ನೀವು ಸೋಲನ್ನು ಅನುಭವಿಸಿದ್ದರೆ ,ಆಗ ಮನಸ್ಸಿನಲ್ಲಾಗುವ ನೋವನ್ನು ಹೇಗೆ ತಾನೇ ಅದುಮಿಡಲು ಸಾಧ್ಯ? ಸೋತ ನೋವಿಗಿಂತ ಅನ್ಯಾಯದ ವಿರುದ್ದ ಸಿಡಿದೇಳುವುದೇ ಹೆಚ್ಚು.


     ಆದರೆ ಸೋಲು ಯಾರಿಗೂ ಶಾಶ್ವತವಲ್ಲ. ಸೃಷ್ಠಿಸಿದ ದೇವರು ಯಾರಿಗೂ ಮೋಸ ಮಾಡಲ್ಲ.ನಮ್ಮ ಪರಿಶ್ರಮಕ್ಕೆ ಮನುಷ್ಯರ ನ್ಯಾಯಾಲಯದಲ್ಲಿ ನ್ಯಾಯ ದೊರಕದಿದ್ದರೂ ,ದೇವರ ನ್ಯಾಯಾಲಯದಲ್ಲಿ ಖಂಡಿತ ನ್ಯಾಯ ದೊರಕುತ್ತದೆ. ನಮಗೂ ಒಳ್ಳೇ ಕಾಲ ಬಂದೇ ಬರುತ್ತದೆ ಎಂದು ನಂಬಿ ನಮ್ಮ ಎದುರಾಳಿಯ ಎದುರು ಆತ್ಮವಿಶ್ವಾಸದ ನಗೆಬೀರಿದರೆ ಅವನು ಹೇಗೆ ತಾನೆ ತನ್ನ ಗೆಲುವಿನ ರೋಮಾಂಚನವನ್ನು ಅನುಭವಿಸಲು ಸಾಧ್ಯ? ಅಲ್ಲವೇ..



Wednesday, February 24, 2010

ಪ್ರಜ್ವಲಿಸಲಿ ಈ ಬೆಳಕು

         ಬರೆಯುವುದನ್ನು ಬಿಟ್ಟು ದಿನಗಳಾಗಿತ್ತು.ಮತ್ತೆ  ಬರೆಯುವ ಮನಸಾಗಿದೆ. ಮಂಕು ಬಡಿದಿದ್ದ ನನ್ನ ಮನಸ್ಸನ್ನು ಎಚ್ಚರಿಸಿದ ನನ್ನ ಸ್ನೇಹಿತೆಯರಿಗೆ ನಿಜಕ್ಕೂ ಥ್ಯಾಂಕ್ಸ್ ಹೇಳಬೇಕು, ಉದಾಸೀನವೋ ಬೇಸರವೋ  ಕಾರಣ ನನಗೆ ಗೊತ್ತಿಲ್ಲ  ಆದರೆ ಹೀಗೆ ಬರೆಯುವುದನ್ನು ಬಿಟ್ಟು ತಿಂಗಳುಗಳೇ ಕಳೆದಿತ್ತು. ಇತ್ತೀಚಿಗೆ ನನ್ನ ಗೆಳತಿಯರೆಲ್ಲರೂ ತಮ್ಮ ಬ್ಲಾಗುಗಳಲ್ಲಿ ಲೇಖನಗಳನ್ನು ಬರೆಯುವುದನ್ನು ಕಂಡು ನಾನೇಕೆ ಪ್ರಯತ್ನಿಸಬಾರದು ಎಂಬ ಕುತೂಹಲ ಮತ್ತು ಹಟದಿಂದ ಬರೆಯಲು ಶುರು ಮಾಡಿದೀನಿ.
 ಅಂತು ಬ್ಲಾಗು ಓಪನ್ ಮಾಡಿ ಆಯಿತು. ಆದರೆ ಅದಕ್ಕೊಂದು ಒಳ್ಳೆ  ಅರ್ಥಪೂರ್ಣ ಹೆಸರು ಬೇಡವೇ? ಅದಕ್ಕೂ ತಲೆಕೆಡಿಸಿ ಅಯಿತು. ಕ್ಲಾಸಲ್ಲಿ ಕೂಡ ಅದೇ ಚಿಂತೆ.ಯಾವ ಹೆಸರು ಅಯ್ಕೆ ಮಾಡಿದರೂ ಸಮಾಧಾನವಾಗುತ್ತಿರಲಿಲ್ಲ. ಕೊನೆಗೆ ನನಗೆ ಹಿಡಿಸಿದ ಹೆಸರೇ ಈ "ಬೆಳಕು". ಇದು ನನ್ನ ಹೆಸರಿನ ಅನ್ವರ್ಥವೂ ಹೌದು.
        "ಕತ್ತಲೆಯಿಂದ ಬೆಳಕಿನೆಡೆೆಗೆ" "ಸೋಲಿನಿಂದ ಗೆಲುವಿನೆಡೆಗೆ"   ಎನ್ನುವ ಹಾಗೆ ಈ ಪಯಣ ಮುಂದೆ ಸಾಗುತಿರಲಿ , ಈ ಬೆಳಕು ಸದಾ ಪ್ರಕಾಶಮಾನವಾಗಿ ಪ್ರಜ್ವಲಿಸಲಿ ಎಂಬುದೇ ನನ್ನ ಆಸೆ. ಅದಕ್ಕೆ ನಿಮ್ಮ ಪ್ರೋತ್ಸಾಹ ತುಂಬ ಅಗತ್ಯ. ನನ್ನ ಬರವಣಿಗೆಯಲ್ಲಿ ಏನೇ ತಪ್ಪುಗಳು ಕಂಡು ಬಂದರೂ ನೀವು ನನ್ನನ್ನು ತಿದ್ದಬಹುದು. ನಿಮ್ಮ ಸಲಹೆ ,ಅಭಿಪ್ರಾಯಗಳೇನೇ ಪ್ರತಿಕ್ರಿಯೆಗಳಿದ್ದರೂ ತಿಳಿಸಿ. ನಾನು ತಿದ್ದಿ ಕೊಳ್ಳುತೇನೆ.