Wednesday, February 24, 2010

ಪ್ರಜ್ವಲಿಸಲಿ ಈ ಬೆಳಕು

         ಬರೆಯುವುದನ್ನು ಬಿಟ್ಟು ದಿನಗಳಾಗಿತ್ತು.ಮತ್ತೆ  ಬರೆಯುವ ಮನಸಾಗಿದೆ. ಮಂಕು ಬಡಿದಿದ್ದ ನನ್ನ ಮನಸ್ಸನ್ನು ಎಚ್ಚರಿಸಿದ ನನ್ನ ಸ್ನೇಹಿತೆಯರಿಗೆ ನಿಜಕ್ಕೂ ಥ್ಯಾಂಕ್ಸ್ ಹೇಳಬೇಕು, ಉದಾಸೀನವೋ ಬೇಸರವೋ  ಕಾರಣ ನನಗೆ ಗೊತ್ತಿಲ್ಲ  ಆದರೆ ಹೀಗೆ ಬರೆಯುವುದನ್ನು ಬಿಟ್ಟು ತಿಂಗಳುಗಳೇ ಕಳೆದಿತ್ತು. ಇತ್ತೀಚಿಗೆ ನನ್ನ ಗೆಳತಿಯರೆಲ್ಲರೂ ತಮ್ಮ ಬ್ಲಾಗುಗಳಲ್ಲಿ ಲೇಖನಗಳನ್ನು ಬರೆಯುವುದನ್ನು ಕಂಡು ನಾನೇಕೆ ಪ್ರಯತ್ನಿಸಬಾರದು ಎಂಬ ಕುತೂಹಲ ಮತ್ತು ಹಟದಿಂದ ಬರೆಯಲು ಶುರು ಮಾಡಿದೀನಿ.
 ಅಂತು ಬ್ಲಾಗು ಓಪನ್ ಮಾಡಿ ಆಯಿತು. ಆದರೆ ಅದಕ್ಕೊಂದು ಒಳ್ಳೆ  ಅರ್ಥಪೂರ್ಣ ಹೆಸರು ಬೇಡವೇ? ಅದಕ್ಕೂ ತಲೆಕೆಡಿಸಿ ಅಯಿತು. ಕ್ಲಾಸಲ್ಲಿ ಕೂಡ ಅದೇ ಚಿಂತೆ.ಯಾವ ಹೆಸರು ಅಯ್ಕೆ ಮಾಡಿದರೂ ಸಮಾಧಾನವಾಗುತ್ತಿರಲಿಲ್ಲ. ಕೊನೆಗೆ ನನಗೆ ಹಿಡಿಸಿದ ಹೆಸರೇ ಈ "ಬೆಳಕು". ಇದು ನನ್ನ ಹೆಸರಿನ ಅನ್ವರ್ಥವೂ ಹೌದು.
        "ಕತ್ತಲೆಯಿಂದ ಬೆಳಕಿನೆಡೆೆಗೆ" "ಸೋಲಿನಿಂದ ಗೆಲುವಿನೆಡೆಗೆ"   ಎನ್ನುವ ಹಾಗೆ ಈ ಪಯಣ ಮುಂದೆ ಸಾಗುತಿರಲಿ , ಈ ಬೆಳಕು ಸದಾ ಪ್ರಕಾಶಮಾನವಾಗಿ ಪ್ರಜ್ವಲಿಸಲಿ ಎಂಬುದೇ ನನ್ನ ಆಸೆ. ಅದಕ್ಕೆ ನಿಮ್ಮ ಪ್ರೋತ್ಸಾಹ ತುಂಬ ಅಗತ್ಯ. ನನ್ನ ಬರವಣಿಗೆಯಲ್ಲಿ ಏನೇ ತಪ್ಪುಗಳು ಕಂಡು ಬಂದರೂ ನೀವು ನನ್ನನ್ನು ತಿದ್ದಬಹುದು. ನಿಮ್ಮ ಸಲಹೆ ,ಅಭಿಪ್ರಾಯಗಳೇನೇ ಪ್ರತಿಕ್ರಿಯೆಗಳಿದ್ದರೂ ತಿಳಿಸಿ. ನಾನು ತಿದ್ದಿ ಕೊಳ್ಳುತೇನೆ.

No comments:

Post a Comment